Saturday, November 22, 2008

ಚಿತ್ರಗಳೂ.. ಪಾತ್ರಗಳೂ..

ಬದುಕಿನ ಹಾದಿಯಲ್ಲಿ ಸಿಕ್ಕವರೆಲ್ಲರೂ ನೆನಪಿರುವುದಿಲ್ಲ ...ನೆನಪಿಟ್ಟುಕೊಳ್ಳುವ ಅವಶ್ಯಕತೆ ಅನಿವಾರ್ಯತೆ ನಮಗಿಲ್ಲ.... ಹಾಗಿದ್ದರೂ ಕೆಲವರು ಬೇಡ ಬೇಡವೆಂದರೂ ನೆನಪಿರುತ್ತಾರೆ..ಅಂತವರಿಗಾಗಿ ಈ ಜಾಗ...ಈ ಜಾಗದಲ್ಲಿ ಬಂದು ಹೋಗುವ ಪಾತ್ರಗಳೆಲ್ಲಾ ಪಾತ್ರಗಳಲ್ಲ.. ಕೆಲವು ಕಲ್ಪನೆಯ ಚಿತ್ರಗಳೂ ಇರಬಹುದು... ಆದರೆ ಆ ಚಿತ್ರಗಳಿಗೆ ಜೀವವಿದೆ...ನಮ್ಮನ್ನು ಎಡಬಿಡದೆ ಕಾಡುವ ಶಕ್ತಿಯಿದೆ...ಹೀಗಾಗಿ ಈ ಜಾಗದಲ್ಲಿ ಅವೂ ಇವೆ...
ನಮ್ಮೂರಿನ ಹೊಳೆ... ಅದಕ್ಕೆ ಕಟ್ಟಿದ ಬ್ರಿಜ್ಜು .. ಬ್ರಿಜ್ಜಿನಿಂದ ಕೆಳಗೆ ಹಾರಿದ ಕೆಲವರು ... ಹಾರಿದವರಿಗಾಗಿ ಗುಡಿ ಕಟ್ಟಿಸುವ ಇನ್ನೊಬ್ಬರು.. ಮೈಮೇಲೆ ಬರುವ ದೇವರುಗಳು..ಬುದ್ಧಿ ಸರಿ ಇದ್ದವರು... ಸರಿ ಇಲ್ಲದವರು ...ಕುಡುಕರು..ಕಡುಕರು.. ನನ್ನ ಮಾಸ್ತರ್ರು... ಚಾದರ ಮಾರುವವರು...ಬುಧವಾರದ ಸಂತೆಯವರು.. ಯಕ್ಷಗಾನ...ಭಾಗವತರು.. ಕಲ್ಲು ಕಡಿಯುತ್ತಿದ್ದ ಹೊಂಡ... ಪಂಜರಗಡ್ಡೆ ಬುಡ.. ಅದಕ್ಕೆ ಬರುವ ಹಂದಿ.. ಮೇಸ್ತರಕೇರಿ...ನಾಗರ ಕಲ್ಲು... ನಮ್ಮನೆ ಗದ್ದೆ ...ಅಲ್ಲಿ ಬೆಳೆಯುವ ಭತ್ತ ..ಉಣ್ಣುವ ನಾವು.. ನನ್ನ ಗೆಳೆಯರು ..ಗೆಳತಿಯರು..ಜಗಳ ಮಾಡಿದವರು.. ಬೈಸಿಕೊಂಡವರು..ಬೈದವರು...ಹೊಗಳಿದವರು..ಹಿಂದೆ ಮಾತಾಡಿಕೊಂಡವರು ..ಹಾಸ್ಟೆಲ್ ನಲ್ಲಿ ಸಿಕ್ಕವರು.. ಸಿಗದ ಇನ್ನೂ ಹಲವರು.. ಹೀಗೆ ಪಾತ್ರಗಳೂ ಚಿತ್ರಗಳಾಗಿವೆ ...ಚಿತ್ರಗಳೂ .. ಪಾತ್ರಗಳಾಗಿವೆ... ಈ ಸಿಕ್ಕಿಬಿದ್ದ ಚಿತ್ರಗಳಲ್ಲಿ ಪಾತ್ರಗಳನ್ನು .. ಪಾತ್ರಗಳಲ್ಲಿ ಚಿತ್ರಗಳನ್ನು ಹುಡುಕುವ ಜವಾಬ್ದಾರಿ ನಿಮ್ಮದು ....